ಮೊಬೈಲ ಕ್ಯಾಮೆರಾ ಇದ್ದರೆ ಸಾಕು ಈ ಕೆಲಸದಿಂದ ತಿಂಗಳಿಗೆ ದೊಡ್ಡ ಇನ್ಕಮ್

BusinessInKannada ಏನು ಈ ಹೊಸ ಬಿಸಿನೆಸ್ ಐಡಿಯಾ?

ಈ ಕೆಲಸದಲ್ಲಿ ನೀವು ಫ್ರೀಲಾನ್ಸ್ ಟ್ರಾವೆಲ್ ಫೋಟೋಗ್ರಾಫರ್ ಮತ್ತು ವಿಡಿಯೋಗ್ರಾಫರ್ ಆಗುತ್ತೀರಿ.

ಇಂದಿನ ಕಾಲದಲ್ಲಿ ಎಲ್ಲರೂ ತಮ್ಮ ಪ್ರಯಾಣದ ಕ್ಷಣಗಳ ವಿಡಿಯೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲು ಬಯಸುತ್ತಾರೆ ಆದರೆ ಎಲ್ಲರಲ್ಲೂ ಪ್ರೊಫೆಶನಲ್ ಫೋಟೋ ತೆಗೆದು ಕೊಡುವ ಕೌಶಲ್ಯ ಅಥವಾ ಸಮಯ ಇರೋದಿಲ್ಲ.

ಅಲ್ಲೇ ನೀವು ಬಂದು ಸೇರುತ್ತೀರಿ!

ಒಂದು ಶೂಟ್‌ಗೆ ₹500 ರಿಂದ ₹800 ರವರೆಗೆ ಚಾರ್ಜ್ ಮಾಡಬಹುದು.

ಒಂದು ದಿನಕ್ಕೆ 5–6 ಶೂಟ್ ಮಾಡಿದರೆ ₹3,000 ರಿಂದ ₹5,000 ವರೆಗೆ ಸುಲಭವಾಗಿ ಗಳಿಸಬಹುದು.

ಕಡಿಮೆ ಹೂಡಿಕೆಯಲ್ಲಿ ದೊಡ್ಡ ಆರಂಭ

ಈ ಬಿಸಿನೆಸ್‌ನ ಸೌಂದರ್ಯವೇನೆಂದರೆ ಇದಕ್ಕೆ ದೊಡ್ಡ ಹೂಡಿಕೆ ಬೇಕಾಗಿಲ್ಲ.

ನಿಮ್ಮ ಬಳಿ ಮೊಬೈಲ್ ಕ್ಯಾಮೆರಾ ಇದ್ದರೆ ಸಾಕು, ಅದರಿಂದ ಶುರು ಮಾಡಬಹುದು.

ಸಾಮಾನು ಅಂದಾಜು ವೆಚ್ಚ

ಮೊಬೈಲ್ (ಉತ್ತಮ ಕ್ಯಾಮೆರಾ ಇರುವದು) ₹15,000 – ₹20,000

DSLR ಕ್ಯಾಮೆರಾ (ಅಪ್ಗ್ರೇಡ್ ಮಾಡಿದರೆ) ₹35,000 – ₹40,000

ಫೋಟೋ ಎಡಿಟಿಂಗ್ ಆಪ್ / ಸಾಫ್ಟ್‌ವೇರ್ ₹1000 – ₹2000

ಪ್ರಯಾಣ ವೆಚ್ಚ ₹1000 ಪ್ರತಿ ದಿನ

ಶುರು ಮಾಡಲು ₹10,000 ಕೂಡ ಸಾಕು!

ಮೊದಲಿಗೆ ಫ್ರೀ ಶೂಟ್ ಮಾಡಿ, ನಿಮ್ಮ ಪೋರ್ಟ್ಫೋಲಿಯೋ ನಿರ್ಮಿಸಿ — ಗ್ರಾಹಕರಿಗೆ ನಿಮ್ಮ ಕೆಲಸದ ಗುಣಮಟ್ಟ ತೋರಿಸಿ.

ಹೆಚ್ಚುವರಿ ಆದಾಯದ ಮಾರ್ಗಗಳು

ಈ ಉದ್ಯಮದಲ್ಲಿ ಆದಾಯ ಕೇವಲ ಫೋಟೋಶೂಟ್‌ನಲ್ಲೇ ಸೀಮಿತವಲ್ಲ.

ನೀವು ಶೂಟ್ ಮಾಡಿದ ವಿಡಿಯೋಗಳನ್ನು YouTube, Instagram, Facebook ಮುಂತಾದ ಸೋಶಿಯಲ್ ಮೀಡಿಯಾ ಗಳಲ್ಲಿ ಅಪ್‌ಲೋಡ್ ಮಾಡಿ ಡಿಜಿಟಲ್ ಇನ್‌ಕಮ್ ಗಳಿಸಬಹುದು.

ಇಂದಿನ ಟ್ರೆಂಡ್ “ಟ್ರಾವೆಲ್ ರೀಲ್ಸ್” ಮತ್ತು “ವ್ಲಾಗ್ಸ್” ನೀವು ಚೆನ್ನಾಗಿ ಮಾಡಿದರೆ ಬ್ರ್ಯಾಂಡ್‌ಗಳಿಂದ ಸ್ಪಾನ್ಸರ್‌ಶಿಪ್‌ಗಳು ಹಾಗೂ ಜಾಹೀರಾತುಗಳೂ ಬರುತ್ತವೆ.

ಹೋಟೆಲ್‌ಗಳು, ಟ್ರಾವೆಲ್ ಏಜೆನ್ಸಿಗಳು ಕೂಡ ತಮ್ಮ ಪ್ರಚಾರಕ್ಕಾಗಿ ಸ್ಥಳೀಯ ಫೋಟೋಗ್ರಾಫರ್‌ರನ್ನು ಸಂಪರ್ಕಿಸುತ್ತಾರೆ

ಇದರಿಂದ ನಿಮ್ಮ ಆದಾಯ ಇನ್ನಷ್ಟು ಹೆಚ್ಚುತ್ತದೆ.

ಹೇಗೆ ಶುರು ಮಾಡಬೇಕು?

YouTube ಅಥವಾ ಆನ್‌ಲೈನ್‌ನಲ್ಲಿ ಫೋಟೋಗ್ರಫಿ ಹಾಗೂ ಎಡಿಟಿಂಗ್ ತರಬೇತಿ ಪಡೆಯಿರಿ.

ನಿಮ್ಮ ಹತ್ತಿರದ ಟೂರಿಸ್ಟ್ ಪ್ಲೇಸ್‌ಗಳ ಪಟ್ಟಿ ಮಾಡಿರಿ.

ಅಲ್ಲಿ ಹೋಗಿ ಜನರ ಜೊತೆ ಮಾತನಾಡಿ, ನಿಮ್ಮ ಸ್ಯಾಂಪಲ್ ವರ್ಕ್ ತೋರಿಸಿ.

Instagram, Facebook, WhatsApp ಗ್ರೂಪ್‌ಗಳಲ್ಲಿ ನಿಮ್ಮ ಪೇಜ್ ಕ್ರಿಯೇಟ್ ಮಾಡಿ ಮತ್ತು ಪ್ರಚಾರ ಮಾಡಿ.

ಹೀಗೆ ನಿಮ್ಮ ಹೆಸರು ಹಾಗೂ ಕ್ಲೈಂಟ್ ನೆಟ್‌ವರ್ಕ್ ಬೆಳೆಯುತ್ತದೆ.

ಈ ಬಿಸಿನೆಸ್‌ನ ಪ್ರಮುಖ ವೈಶಿಷ್ಟ್ಯಗಳು

ಯಾವುದೇ ಆಫೀಸ್ ಅವಶ್ಯಕತೆ ಇಲ್ಲ

ನಿಮ್ಮ ಸಮಯಕ್ಕೆ ತಕ್ಕಂತೆ ಕೆಲಸ

ಸೈಡ್ ಇನ್‌ಕಮ್‌ಗೆ ಸೂಕ್ತ ಆಯ್ಕೆ

ನಿಮ್ಮ ಹವ್ಯಾಸವನ್ನು ವೃತ್ತಿಯನ್ನಾಗಿ ಮಾಡೋ ಅವಕಾಶ

ಇದು ಕೇವಲ ಬಿಸಿನೆಸ್ ಅಲ್ಲ ಲೈಫ್‌ಸ್ಟೈಲ್ ಬದಲಾವಣೆ! ನೀವು ಇಷ್ಟಪಟ್ಟ ಕೆಲಸ ಮಾಡಿ, ಹೊಸ ಹೊಸ ಸ್ಥಳಗಳನ್ನು ನೋಡಿ, ಆರ್ಥಿಕ ಸ್ವಾತಂತ್ರ್ಯವನ್ನು ಪಡೆಯಿರಿ.

ತೀರ್ಮಾನ

ನಿಮಗೆ ಟ್ರಾವೆಲ್ ಇಷ್ಟ, ಜನರ ಜೊತೆ ಮಾತನಾಡೋದು ಇಷ್ಟ, ಕ್ಯಾಮೆರಾದ ಜೊತೆ ಸ್ನೇಹವಿದೆ ಅಂದ್ರೆ ಈ ಬಿಸಿನೆಸ್ ನಿಮ್ಮಗಾಗಿ.

ಸ್ವಲ್ಪ ಶ್ರಮ, ಸ್ವಲ್ಪ ಆತ್ಮವಿಶ್ವಾಸ, ಮತ್ತು ನಿರಂತರ ಪ್ರಯತ್ನ ಮಾಡಿದರೆ ಒಂದು ದಿನ ಇದೇ ಹವ್ಯಾಸ ನಿಮ್ಮ ಜೀವನವನ್ನು ಸಂಪೂರ್ಣವಾಗಿ ಬದಲಾಯಿಸುತ್ತದೆ.

ನಮ್ಮ WhatsApp channel ಜಾಯಿನ್ ಆಗಿ

Leave a Comment